GOVT. HIGHER PRIMARY SCHOOL MUDBAL (B)
Monday, September 9, 2024
ನಮ್ಮ ಶಾಲೆಯಲ್ಲಿ 2008 ರಿಂದ 2024ರ ವರೆಗೆ ಹದಿನಾರು ವರ್ಷಗಳ ಕಾಲ ಸೇವೆ ಸಲ್ಲಿಸಿ 2023-24 ನೇ ಸಾಲಿನಲ್ಲಿ ನಡೆದ ಶಿಕ್ಷಕರ ವರ್ಗಾವಣೆಯಲ್ಲಿ ನಮ್ಮ ಶಾಲೆಯ ಶಿಕ್ಷಕರಾದ ಶ್ರೀ ಮಲ್ಲಿಕಾರ್ಜುನ ಕೊಂಗಿ ಸರ್ ಅವರು ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೈದಾಪುರಕ್ಕೆ ವರ್ಗಾವಣೆಯಾದ ಪ್ರಯುಕ್ತ ಸದರಿಯವರನ್ನು ನಮ್ಮ ಶಾಲೆಯಿಂದ ಪ್ರೀತಿಪೂರ್ವಕ ಸನ್ಮಾನದೊಂದಿಗೆ ಬೀಳ್ಕೊಡಲಾಯಿತು. ಸದರಿಯವರು ನಮ್ಮ ಶಾಲೆಗೆ ಒಂದು ಡಯಾಸನ್ನು ದೇಣಿಗೆಯಾಗಿ ನೀಡಿರುತ್ತಾರೆ. ಶ್ರೀ ಮಲ್ಲಿಕಾರ್ಜುನ ಕೊಂಗಿ ಸರ್ ಅವರಿಗೆ ಧನ್ಯವಾದಗಳು ಅವರ ಮುಂದಿನ ಸೇವೆ ಸಂತಸ ಮಯವಾಗಿರಲೆಂದು ನಮ್ಮ ಶಾಲೆಯ ಪರವಾಗಿ ಹಾರೈಸುತ್ತೇವೆ
ದಿ : 15-08-2024 ರಂದು ನಮ್ಮ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲೆಯ ಮಕ್ಕಳಿಗೆ, ಗ್ರಾಮ ಪಂಚಾಯತನ ಸದಸ್ಯರುಗಳು,SDMC ಯವರು, ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು, ಪ್ರತಿನಿಧಿಗಳು ಲೇಖನ ಸಾಮಗ್ರಿಗಳನ್ನು ನೀಡಿ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿರುತ್ತಾರೆ. ಕಾರ್ಯಕ್ರಮದಲ್ಲಿ ಬ್ಲೂಟೂತ್ ಸೌಂಡ್ ಸಿಸ್ಟಮ್ ಅನ್ನು ಕಾಣಿಕೆಯಾಗಿ ನೀಡಿರುತ್ತಾರೆ.
Subscribe to:
Posts (Atom)




































